ಕೆಎಸ್‌ಎನ್‌ಡಿಎಂಸಿಯ ಉದ್ದೇಶಗಳು
- ವಿಪತ್ತು ನಿರ್ವಹಣೆಯು ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳಿಗೆ ಸಮಯೋಚಿತ ಪೂರ್ವಭಾವಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯನ್ನುಒದಗಿಸುವ ಮೂಲಕ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸಾಮಾನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
- ಕರ್ನಾಟಕ ಸರ್ಕಾರವು 1988 ರಲ್ಲಿಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸಂಬಂಧಪಟ್ಟ ಒಂದು ಸಾಂಸ್ಥಿಕ ಕಾರ್ಯವಿಧಾನವಾಗಿ ಬರಗಾಲ ಉಸ್ತುವಾರಿ ಕೋಶ (ಡಿಎಂಸಿ)ವನ್ನು ಸ್ಥಾಪಿಸಲು ಕರ್ನಾಟಕ ರಾಜ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
- ವಿಪತ್ತು ನಿರ್ವಹಣಾ ಕಾಯಿದೆ 2005 ಅಡಿ,ಭಾರತ ಸರ್ಕಾರವು ವಿಪತ್ತು ನಿರ್ವಹಣೆಯಲ್ಲಿನ ಪಾರುಗಾಣಿಕೆ,ಉಪಶಮನ ಕೇಂದ್ರಿತ ವಿಧಾನದಿಂದ ಸನ್ನದ್ಧತೆಗೆ, ಮುನ್ನೆಚ್ಚರಿಕೆಯ ವಿಧಾನದಿಂದ ಮಾದರಿ ಬದಲಾವಣೆಯನ್ನು ಪುನರುಚ್ಚರಿಸುತ್ತದೆ.
- ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ...