ಸಿಡಿಲು ನಿರ್ವಹಣೆ
ಹವಾಮಾನ ಸಂಬಂಧಿತ ನೈಸರ್ಗಿಕ ವಿಕೋಪಗಳಲ್ಲಿ ಸಿಡಿಲು ಬಡಿತವೂ ಒಂದು. ಮೊಡಗಳಲ್ಲಿ ಉಂಟಾಗುವ ಭೌತಿಕ ಪ್ರಕ್ರಿಯೆಯಿಂದ ಬಿಡುಗಡೆಯಾಗುವ ಅಪಾರ ಪ್ರಮಾಣದ ಶಕ್ತಿಯ ಪ್ರವಹನೆಯಿಂದ ಸಿಡಿಲು ಉಂಟಾಗುತ್ತದೆ. ಮೋಡಗಳ ಒಳಗೆ, ಮೋಡದಿಂದ ಮೋಡಕ್ಕೆ ಹಾಗೂ ಮೋಡಗಳಿಂದ ಭೂಮಿಗೆ ಸಿಡಿಲು ಪ್ರವಹಿಸುತ್ತದೆ. ಇದರಲ್ಲಿ ಅಪಾರ ಪ್ರಮಾಣದ ವಿದ್ಯುತ್ ಇರುತ್ತಾದದುರಿಂದ ಸಿಡಿಲು ಬಡಿತಕ್ಕೆ ಒಳಗಾದವರು ಶಕ್ತಿಯ ಪ್ರವಹನೆಯಿಂದ ಅಸುನೀಗುತ್ತಾರೆ. ನಮ್ಮ ದೇಶದಲ್ಲಿ ಇತರೆ ನೈಸರ್ಗಿಕ ವಿಕೋಪಗಳಿಂದ ಆಗುವ ಜೀವಹಾನಿಗಳಿಗಿಂತ ಸಿಡಿಲು ಬಡಿತದಿಂದಾಗುವ ಜೀವಹಾನಿಯೇ ಹೆಚ್ಚು.
ಸಿಡಿಲು ಬಡಿತ ಅಪಾಯವನ್ನು ತಗ್ಗಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯದಲ್ಲಿ ಸಂಭವನಿಯ ಸಿಡಿಲು ಬಡಿತದ ಪ್ರದೇಶವನ್ನು ಗುರುತಿಸಿ, ಅಯಾ ಪ್ರದೇಶಗಳ ಸಮುದಾಯಗಳಿಗೆ ಮುನ್ನೆಚ್ಚರಿಕೆ ನೀಡುವ ತಾಂತ್ರಿಕತೆಯನ್ನು 2018 ರಲ್ಲಿ ಅಳವಡಿಸಲಾಗಿದೆ. ಒಟ್ಟು 12 ಸಿಡಿಲು ಸಂವೇದಕಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿದ್ದು, ಅದರ ಮೂಲಕ ಲಭ್ಯವಾಗುವ ಮಾಹಿತಿಯನ್ನಾಧಾರಿಸಿ ಸುಮಾರು 30-45 ನಿಮಿಷಗಳಿಗಿಂತ ಮುಂಚಿತವಾಗಿ ಸಿಡಿಲು ಬಡಿಯುವ ಸಂಭವನಿಯ ಪ್ರದೇಶದ ಜನರಿಗೆ SMS ಗಳ ಮೂಲಕ ಮುನ್ನೆಚ್ಚರಿಕೆ ಕೊಡಲಾಗುತ್ತಿದೆ.
ಸಿಡಿಲಿಗೆ ಸಂಬಂಧಿಸಿದ ಮುನ್ನೆಚ್ಚರಿಕೆಯನ್ನು ಸಾರ್ವಜನಿಕರಿಗೆ ತಲುಪಿಸುವ ದೃಷ್ಟಿಯಿಂದ “ಸಿಡಿಲು” ಮೊಬೈಲ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದ್ದು ಇದರ ಮೂಲಕ ನಿರ್ದೀಷ್ಟ ಸ್ಥಳ ವಿವರದ ಸಹಿತ ಸಿಡಿಲು ಬಡಿತ ಮುನ್ನೆಚ್ಚರಿಕೆ ಸಂದೇಶ ಹಗೂ ಸಿಡಿಲಿನ ಹಾನಿಯಿಂದ ತಪ್ಪಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಲಹೆ ಸೂಚನೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ.
ಮತ್ತಷ್ಟು ಓದು..