ಜಲವಿಜ್ಞಾನ ಮೇಲ್ವಿಚಾರಣೆ

ಜಲ ವಿಜ್ಞಾನ ವಿಭಾಗ

ಜಲ ವಿಜ್ಞಾನವು ವಿಜ್ಞಾನದ ಒಂದು ಭಾಗವಾಗಿದ್ದು, ಜಲಚಕ್ರ, ಜಲ ಸಂಪನ್ಮೂಲಗಳ ವಿಸ್ತರಣೆ ಮತ್ತು ಹಂಚಿಕೆ ಜಲಸಂಪನ್ಮೂಲಗಳ ನಿರ್ವಹಣೆ ಮತ್ತು ಜಲಾನಯನಗಳ ಅಭಿವೃದ್ಧಿ ಹಾಗೂ ಇತರ ಜಲಸಂಬಂಧಿತ ವಿಷಯಗಳ ಅಧ್ಯಯನವಾಗಿದೆ. ಜಲ ಚಕ್ರವು ಭೂಮಿಯ ಮೇಲಿನ, ನೆಲದಾಳದಲ್ಲಿ ಹಾಗೂ ವಾತಾವರಣದಲ್ಲಿ ವಿವಿಧ ರೂಪಗಳಲ್ಲಿ ನಿರಂತರ ಚಲನೆಯನ್ನು ವಿವರಿಸುತ್ತದೆ. ಜಲಚಕ್ರದಲ್ಲಿ ಅವಿಯಾದ ನೀರು ವಾತಾವರಣವನ್ನು ಸೇರಿ ಘನೀಕರಿಸಿ ನಂತರ ಮೋಡವಾಗಿ ಮಳೆಯಾಗಿ ಸುರಿದು ಭೂಮಿಯ ಮೇಲ್ಮೈಗೆ ಹರಿದು ಕೆರೆಕಟ್ಟೆ, ಜಲಾಶಯ ಮತ್ತು ಸಾಗರಗಳಲ್ಲಿ ಸಂಗ್ರಹಣೆಯಾಗುತ್ತದೆ ಹಾಗೂ ನೆಲದಾಳಕ್ಕೆ ಇಳಿದು ಅಂತರ್ಜಲ ರೂಪದಲ್ಲಿ ಸಂಗ್ರಹವಾಗುತ್ತದೆ. ಪುನ: ಅದೇ ನೀರು ಆವಿಯಾಗುವ ಮೂಲಕ ಜಲಚಕ್ರವು ನಿರಂತರವಾಗಿ ಮುಂದುವರೆಯುತ್ತದೆ.
ಜಲ ವಿಜ್ಞಾನ ವಿಭಾಗವು ಜಲ ವಿಜ್ಞಾನಕ್ಕೆ ಸಂಬಂಧಿಸಿದ ಬರ, ಪ್ರವಾಹ, ಜಲಾಶಯಗಳು, ಕೆರೆಕಟ್ಟೆಗಳು, ಜಲಾನಯನ ಅಭಿವೃದ್ಧಿ, ನದಿ ನೀರು ಹಂಚಿಕೆ ಮತ್ತು ನಗರ ಪ್ರವಾಹ, ಮುನ್ಸೂಚನೆ ಹಾಗೂ ಇತರ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳುತ್ತದೆ.

ಜಲ ವಿಜ್ಞಾನ ವಿಭಾಗದ ಮುಖ್ಯ ಕಾರ್ಯಗಳು:

  • ರಾಜ್ಯದಲ್ಲಿನ ಪ್ರಮುಖ ಜಲಾಶಯಗಳು, ಸಣ್ಣ ನೀರಾವರಿ ಕೆರೆಕಟ್ಟೆಗಳು ಹಾಗೂ ಜಲ ಸಂಪನ್ಮೂಲಗಳ ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ, ನಕ್ಷೆಗಳು ಮತ್ತು ವರದಿ ತಯಾರಿಸುವುದು.
  • ಅಂತರ್ಜಲ ಮಟ್ಟದ ದತ್ತಾಂಶಗಳ ಕಲೆಹಾಕುವುದು, ವಿಶ್ಲೇಷಿಸುವುದು ಹಾಗೂ ವರದಿ ತಯಾರಿಸುವುದು.
  • ಬರ ಪರಿಸ್ಥಿತಿಗಳಲ್ಲಿ ಜಲ ಸಂಪನ್ಮೂಲಗಳ ಅಧ್ಯಯನ
  • ಕೃಷ್ಣ ಮತ್ತು ಕಾವೇರಿ ಅಂರ್ತರಾಜ್ಯ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಗೆ ನೆರವು ನೀಡುವುದು.
  • ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಯಂ ಚಾಲಿತ, ಸೌರಶಕ್ತಿ ಆಧಾರಿತ ಹವಾಮಾನ ಮಾಪನ, ಮಳೆಮಾಪನ ಹಾಗೂ ನೀರಿನ ಮಟ್ಟವನ್ನು ಸೂಚಿಸುವ ಸಂವೇದಕ ಉಪಕರಣಗಳ ಸ್ಥಾಪನೆ ಹಾಗೂ ನಿರ್ವಹಣೆ ಮಾಡುವುದು.
  • ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳನ್ನು ಗುರುತಿಸುವುದು ಹಾಗೂ ಜಲಾನಯನ ಅಭಿವೃದ್ಧಿ ಮತ್ತು ತಾಂತ್ರಿಕ ವರದಿಗಳನ್ನು ಸಿದ್ದಪಡಿಸುವುದು.
ಮತ್ತಷ್ಟು ಓದು..