ಭೌಗೋಳಿಕ ಅಪಾಯದ ಮೇಲ್ವಿಚಾರಣೆ

ಭೂಕಂಪನ ಮಾಪನ ಅಧ್ಯಯನ :

ರಾಜ್ಯದಲ್ಲಿ ಸಂಭವಿಸುವ ಭೂಕಂಪನಗಳ ಉಸ್ತುವಾರಿ ಹಾಗೂ ಅಧ್ಯಯನಕ್ಕಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವನ್ನು ನೋಡಲ್‌ ಏಜೆನ್ಸಿಯಾಗಿ ಗುರುತಿಸಿದೆ. ಈ ಕೇಂದ್ರವು 2009 ರಿಂದ ಉಪಗ್ರಹ ಆಧಾರಿತ, ಸೌರಶಕ್ತಿಚಾಲಿತ ಶಾಶ್ವತ ಭೂಕಂಪನಮಾಪನ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲಾಗುತ್ತಿದೆ. ರಾಜ್ಯದ 10 ಪ್ರಮುಖ ಜಲಾಶಯಗಳಾದ ಆಲಮಟ್ಟಿ (ವಿಜಯಪುರ), ಹಿಡಕಲ್‌ (ಬೆಳಗಾವಿ), ಲಿಂಗನಮಕ್ಕಿ (ಶಿವಮೊಗ್ಗ), ಸೂಪ ( ಉತ್ತರಕನ್ನಡ), ತುಂಗಾಭದ್ರಾ (ಬಳ್ಳಾರಿ) ಹೇಮಾವತಿ (ಹಾಸನ) ಕೃಷ್ಣರಾಜಸಾಗರ (ಮೈಸೂರು-ಮಂಡ್ಯ) ಹಾರಂಗಿ (ಕೊಡಗು) ಗುಂಡಾಲ್‌(ಚಾಮರಾಜನಗರ) ಮತ್ತು ಟಿ.ಜಿ.ಹಳ್ಳಿ (ಬೆಂಗಳೂರುನಗರ) ಜಿಲ್ಲೆಗಳಲ್ಲಿ ಹಾಗೂ ಕಲಬುರಗಿ, ರಾಯಚೂರು, ಚಿತ್ರದುರ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಯಾ ಸ್ಥಳದ ಭೌಗೋಳಿಕ ಪ್ರಾಮುಖ್ಯತೆ ಹಾಗೂ ಭೂಕಂಪನ ತೀವ್ರತೆಯನ್ನು ಆಧಾರಿಸಿ ಉಪಗ್ರಹ ಆಧಾರಿತ, ಸೌರಶಕ್ತಿಚಾಲಿತ ಶಾಶ್ವತ ಭೂಕಂಪನಮಾಪನ ಕಾರ್ಯಚಾರಣೆಗೊಳಿಸಲಾಗಿದೆ.

ಭೂಕಂಪನಮಾಪನ ಕೇಂದ್ರಗಳ ವಿಶೇಷತೆಗಳು

  • ನಿಖರ ಭೂಕಂಪನಗಳನ್ನು ದಾಖಲಿಸಲು ಸೂಕ್ತ ಜಿಪಿಎಸ್‌ ಸಹಿತ ಹಾಗೂ ಸೌರಶಕ್ತಿಚಾಲಿತ (12 ವೊಲ್ಟ್‌ ಭೂಕಂಪನ ಉಪಕರಣಗಳು ಹಾಗೂ 24 ವೊಲ್ಟ್‌ ಉಪಗ್ರಹ ಆಧಾರಿತ ಉಪಕರಣಗಳು) ಒಳಗೊಂಡ ಬ್ರಾಡ್‌ಬ್ಯಾಂಡ್ ಸೀಸ್ಮೋಮೀಟರ್‌ಗಳ (CMG-3T), ಸ್ಟ್ರಾಂಗ್ ಮೋಷನ್ ಆಕ್ಸಿಲರೊಗ್ರಾಫ್ಸ್ (CMG-5T), ಡಿಜಿಟಲ್ ಡಾಟಾ ಅಕ್ವಿಸಿಷನ್ ಸಿಸ್ಟಮ್ಸ್ (CMG-DM24-S6-EAM) ಉಪಕರಣಗಳನ್ನು ಸಂಯೋಜನೆ ಮಾಡಲಾಗಿದೆ. ಭೂಕಂಪನಮಾಪನ ಉಪಕರಣಗಳಲ್ಲಿ ದಾಖಲಾದ ನಿಜ ಸಮಯದ ದತ್ತಾಂಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುಖ್ಯ ನಿಯಂತ್ರಣ ಘಟಕಕ್ಕೆ ರವಾನಿಸಲು ಉಪಗ್ರಹ ಆಧಾರಿತ ಸಂಪರ್ಕ ಕಲ್ಪಿಸುವ ಪರಿಕರಗಳನ್ನು ಅಳವಡಿಸಿದೆ.
  • ಭೂಕಂಪನಮಾಪನ ಉಪಕರಣಗಳು ಸ್ಪಷ್ಟ ಹಾಗೂ M≥1.2 ನಿಖರತೆಯ ರಾಜ್ಯದೊಳಗಿನ ಸ್ಥಳೀಯ ಹಾಗೂ ಪ್ರಾದೇಶಿಕ ಪ್ರದೇಶಗಳಲ್ಲಿ ಹಾಗೂ ಭೂಕಂಪನಮಾಪನ ಉಪಕರಣದಿಂದ ಸುಮಾರು 1000 ಕಿ.ಮೀ ದೂರದ ಪ್ರಪಂಚದ ಯಾವುದೇ ಭೂಪ್ರದೇಶಗಳಲ್ಲಿ ಸಹ ಸಂಭವನೀಯ ಲಘು ಭೂಕಂಪನಗಳನ್ನು ದಾಖಲಿಸುತ್ತವೆ.
  • ರಾಜ್ಯದಲ್ಲಿ ಸಂಭವಿಸುವ ಭೂಕಂಪನ ಪ್ರದೇಶವು 100-150 ಕಿ.ಮೀ ವ್ಯಾಪ್ತಿಯಲ್ಲಿದ್ದು, ಕನಿಷ್ಟ 9-10 ಭೂಕಂಪನ ಕೇಂದ್ರಗಳಲ್ಲಿ ಭೂಕಂಪನವನ್ನು ನಿರ್ಧರಿಸುವಲ್ಲಿ ಪ್ರಮುಖವಾದ ಲಂಬ Vertical (Z), ಉತ್ತರ-ದಕ್ಷಿಣ North-South (NS) ಮತ್ತು ಪೂರ್ವ-ಪಶ್ಚಿಮ East-West (EW) ಭೂಖಂಡಾಂತರ ಚಲನೆಯ ದತ್ತಾಂಶಗಳನ್ನು ದಾಖಲಿಸುತ್ತವೆ.

ಭೂಕಂಪನ ವಿಪತ್ತು ನಿರ್ವಹಣೆಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಪ್ರಸ್ತುತ ಅಳವಡಿಸಿರುವ ವೈಜ್ಞಾನಿಕ ವಿಧಾನಗಳು:

  • ಜನ-ಜಾನುವಾರುಗಳು ಜೀವಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟುವುದು ಹಾಗೂ ವಿವಿಧ ಪ್ರದೇಶಗಳಲ್ಲಿನ ಭೂಕಂಪನದ ತೀವ್ರತೆಯನ್ನು ಅಂದಾಜಿಸುವುದು ಹಾಗೂ ನಿರ್ದೀಷ್ಟ ಪ್ರದೇಶಗಳಿಗಲ್ಲಿ ಭೂಬಳಕೆ ಹಾಗೂ ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣ, ರಚನೆ ಮತ್ತು ವಿನ್ಯಾಸಗಳಿಗೆ ತಾಂತ್ರಿಕ ಸಲಹೆಗಳನ್ನು ನೀಡುವುದು.
  • ಭೂಕಂಪನ ಮಾಪನಕೇಂದ್ರಗಳ ದತ್ತಾಂಶಗಳನ್ನು ಆಧಾರಿಸಿ ಸ್ಥಳೀಯ ಹಾಗೂ ಪ್ರಾದೇಶಿಕ ಪ್ರದೇಶಗಳಲ್ಲಿ ಸಂಭವಿಸಿದ ಲಘು ಭೂಕಂಪನಗಳ ನಿಗಾ ವಹಿಸುವುದು ಹಾಗೂ ಲಭ್ಯ ದತ್ತಾಂಶಗಳ ವಿಶ್ಲೇಷಣೆ ಹಾಗೂ ಸಂಭವನೀಯ ಭೂಕಂಪನ ಪ್ರದೇಶಗಳನ್ನು ಗುರುತಿಸುವುದು.
ರಾಜ್ಯದ ಪ್ರಮುಖ ಜಲಾಶಯಗಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯದಲ್ಲಿನ 14 ಶಾಶ್ವತ ಭೂಕಂಪನ ಮಾಪನಕೇಂದ್ರಗಳ ಪೈಕಿ 10 ಶಾಶ್ವತ ಭೂಕಂಪನ ಮಾಪನಕೇಂದ್ರಗಳನ್ನು ಜಲಾಶಯಗಳ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಲಾಗಿದ್ದು ಅಣೆಕಟ್ಟು ಪ್ರೇರಿತ ಭೂಕಂಪನಗಳನ್ನು ನಿಗಾ ವಹಿಸಲಾಗುತ್ತಿದೆ.
ರಾಜ್ಯದಲ್ಲಿ ಸ್ಥಾಪಿಸಲಾಗಿರು ಎಲ್ಲಾ ಶಾಶ್ವತ ಭೂಕಂಪನ ಮಾಪನ ಕೇಂದ್ರಗಳಿಂದ ನಿರಂತರವಾಗಿ ಭೂಕಂಪನ ಸಂಬಂಧಿತ ದತ್ತಾಂಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಮುಖ್ಯ ನಿಯಂತ್ರಣ ಘಟಕದಲ್ಲಿ ಸ್ವೀಕರಿಸಲಾಗುತ್ತಿದ್ದು, ದತ್ತಾಂಶಗಳ ವಿಶ್ಲೇಷಣೆ ಮಾಡಿ ಸ್ಥಳೀಯ ಹಾಗೂ ಪ್ರಾದೇಶಿಕ ಮಟ್ಟದ ಭೂಕಂಪನ ವರದಿಗಳನ್ನು ರಾಜ್ಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕೇಂದ್ರದ ಅಂತರ್ಜಾಲ ತಾಣದಲ್ಲಿ www.ksndmc.org ನೀಡಲಾಗುತ್ತಿದೆ ಹಾಗೂ ಇ-ಮೇಲ್‌, ಮಿಂಚಂಚೆಗಳ ಮೂಲಕವೂ ವರದಿಗಳನ್ನು ನೀಡಲಾಗುತ್ತಿದೆ.
ಕಲ್ಲು ಗಣಿಕಾರಿಕೆಯಿಂದಾಗಿ ಶಾಶ್ವತ ಭೂಕಂಪನ ಮಾಪನ ಕೇಂದ್ರಗಲ್ಲಿ ದಾಖಲಾಗುವ ಲಘು ಭೂಕಂಪನ ವರದಿಗಳನ್ನು ತಯಾರಿಸಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಕೋರಿದಾಗ ನೀಡಲಾಗುತ್ತಿದೆ. ರಾಜ್ಯದೊಳಗಿನ ಸ್ಥಳೀಯ ಹಾಗೂ ಪ್ರಾದೇಶಿಕ ಪ್ರದೇಶಗಳಲ್ಲಿ ಸಂಭವಿಸಿದ ಭೂಕಂಪನಗಳ ವಿವರಗಳನ್ನು ದೈನಂದಿನ ಭೂಕಂಪನ ತಾಂತ್ರಿಕ ವರದಿಗಳನ್ನು ನೀಡಲಾಗುತ್ತಿದ್ದು ಭೂಕಂಪನ ಆಪಾಯ ತಗ್ಗಿಸುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಜಿಲ್ಲೆ, ತಾಲ್ಲೂಕು ಹಾಗೂ ಪ್ರಾದೇಶಿಕ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಲಾಗುತ್ತಿದೆ. ಜಿಲ್ಲಾಡಳಿತಗಳ ಸಹಯೋಗ ಹಾಗೂ ಸಂಪನ್ಮೂಲ ಅಭಿವೃದ್ಧಿ ಯೋಜನೆಯಡಿಯಲ್ಲಿ ತಾತ್ಕಲಿಕ ಶಾಶ್ವತ ಭೂಕಂಪನ ಮಾಪನ ಕೇಂದ್ರಗಳನ್ನು ಸ್ಥಾಪಿಸಿ ನಿರ್ದೀಷ್ಟ ಪ್ರದೇಶಗಳಲ್ಲಿ ಆಗಾಗ್ಗೆ ಸಂಭವಿಸುವ ಲಘು ಭೂಕಂಪನಗಳ ಬಗ್ಗೆ ಸಾರ್ವಜನಿಕ ಅರಿವು/ಜಾಗೃತಿ ಮೂಡಿಸುವ ಕಾರ್ಯಗಾರ ಮತ್ತು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮತ್ತಷ್ಟು ಓದು...